Sunday, May 23, 2010

ಚುನಾವಣೆ

ಭಾರತದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದ ಆಂಗ್ಲರ ಚುನಾವಣೆ ಕೂತೂಹಲ ಕೆರಳಿಸಿತ್ತು!
ಚುನಾವಣೆ ಎಂದ ಕೂಡಲೇ ಭಾರತೀಯನಾದ ನನ್ನ ಮನಸ್ಸಿಗೆ ಬಂದಿದ್ದು ದೊಡ್ಡ ದೊಡ್ಡ ಪೋಸ್ಟರಗಳು, ಎಲ್ಲೆಲ್ಲು ಕಾಣುವ ಬಾವುಟಗಳು, ಲಕ್ಷಾಂತರ ಜನರು ಕೂಡಿರುವ ಸಭೆಗಳು, ದೊಡ್ಡ ದೊಡ್ಡ ಭಾಷಣಗಳು ಇತ್ಯಾದಿ.
ಆದರೆ ನನಗೆ ನಿರಾಸೆ ಕಾದಿತ್ತು..
ನನಗೆ ಕಾಣಿಸಿದ್ದು ೨ ಪೋಸ್ಟರಗಳು ಮಾತ್ರ....
೧. Conservative ಪಕ್ಷ್ಯದ ಒಂದು ಪೊಸ್ಟರ : Gordan Brown ''I created 100000 unemployment in last one year. Help me to create more" :)
೨. ಲೇಬರ್ ಪಕ್ಷ್ಯದ ಪೊಸ್ಟರ:  To Conservatives and democrats "Better luck next time. Its labourer's party this time"

ಮತದಾನದ ಹಕ್ಕು ಬಂದು 10 ವರ್ಷಗಳಾದರೂ, ಒಮ್ಮೆ ಕೂಡ ಮತ ಚಲಾವಣೆ ಮಾಡದ ನನಗೆ ಇಲ್ಲಿಯ ಮತಕಟ್ಟೆಗೆ ಹೋಗುವ ಅವಕಾಶ ಬಂದಿದ್ದು ಆಕಸ್ಮಿಕ! ಇಲ್ಲಿ ಕೌನ್ಸಿಲ್ tax ಕಟ್ಟುವ ಎಲ್ಲರಿಗೂ ಮತದಾನದ ಹಕ್ಕು ಇರುತ್ತದೆ. ನನಗೆ ಮತದಾನದ ಹಕ್ಕು ಸಿಕ್ಕಿಲ್ಲ. ಆಫಿಸ್ ಮುಗಿಸಿ ಸಾಯಂಕಾಲದ 7 ಗಂಟೆಗೆ  ನಡುಗೆ ನೆಪದಲ್ಲಿ ಮತಕಟ್ಟೆಗೆ ಹೋದಾಗ ನಮಗೆ ಆಶ್ಚರ್ಯ. ಒಬ್ಬನೇ ಚುನಾವಣಾಧಿಕಾರಿ ಅಲ್ಲಿದ್ದ. ನೆಪಕ್ಕೆ ಕೂಡ ಯಾವದೇ ಪೋಲಿಸ್ ಇರಲಿಲ್ಲ. ಒಂದು ಪೇಪರ್ನಲ್ಲಿ ಪೆನ್ಸಿಲಿಂದ ಮಾರ್ಕ್ ಮಾಡಿ ಅಲ್ಲಿದ್ದ ಪೆಟ್ಟಿಗೆಯಲ್ಲಿ ಹಾಕಿ ಬಂದರೆ ಆಯಿತು ಮತದಾನ! ಕೌನ್ಸಿಲ್ ಕಳಿಸಿದ್ದ ಒಂದು ಕಾರ್ಡ್ ಬಿಟ್ಟರೆ ಯಾವ ಗುರುತಿನ ಚೀಟಿಯನ್ನು ಕೇಳಲಿಲ್ಲ. ಆ ಕ್ಷಣದಲ್ಲಿ ಭಾರತದ ಚುನಾವಣೆಯ ಹಗರಣಗಳು ನೆನಪಿಗೆ ಬಂದಿತ್ತು. ಮತದಾನದ ರೀತಿ ಭಾರತಲ್ಲಿ ಇದ್ದಷ್ಟು ಮುಂದುವರೆದಿಲ್ಲ.  ಆದರೆ ಈ ಜನರಲ್ಲಿ ತುಂಬಾ ನಂಬಿಕೆ ಇದೆ ಅನಿಸಿತ್ತು! ಚುನಾವಣಾಧಿಕಾರಿಯಾಗಿ ಹೋಗುತ್ತಿದ್ದ ತಂದೆಯವರಿಂದ ಮತಕಟ್ಟೆಯಲ್ಲಿ ಆಗುವ ಗಲಾಟೆಗಳ ಬಗ್ಗೆ ಕೇಳಿದ್ದ ನನಗೆ ಇಲ್ಲಿಯ ರೀತಿ ತುಂಬಾ ಆಶ್ಚರ್ಯ ತಂದಿತ್ತು.

ರಾತ್ರಿ ೧೦ ಗಂಟೆಗೆ ಮತದಾನ ಮುಗಿದರೆ ೧೧ ಗಂಟೆಗೆಲ್ಲ ಮತ ಎಣಿಕೆ ಪ್ರಾರಂಭವಾಗಿತ್ತು. ಬೆಳಿಗ್ಗೆ ಕಾಫಿಯ ಜೊತೆ ಹಿಂದಿನ ದಿನದ ಮತದಾನದ ಫಲಿತಾಂಶ ತಯಾರು. ಆ ಕ್ಷೇತ್ರದ ಅಬ್ಯರ್ಥಿಗಳನ್ನು ಒಂದು ಕಡೆ ನಿಲ್ಲಿಸಿ, ಗೆದ್ದವರನ್ನು ಅಭಿನಂದಿಸಿದರು. ಅಲ್ಲಿಗೆ ಮತದಾನದ ಕಥೆ ಮುಗಿಯಿತು.

ಒಂದು ತಿಂಗಳ ಭರಾಟೆ,ಒಂದು ರಜಾ ದಿನದ ಮತದಾನ, ೧೫ ದಿನ ಕಾಯುವಿಕೆ, ಚುನಾವಣ ನಂತರದ ನಾಟಕಗಳು, ಹೀಗೆ ಯಾವುದೇ ಕುತೂಹಲಕಾರಿ ಸಿನೆಮಾಗೆ ಕಡಿಮೆ ಇರದಂತೆ ರೂಪುಗೊಳ್ಳುವ ಭಾರತದ ಮತದಾನ ಪದ್ದತಿಯ ಮಜಾ ಇವರಿಗೆಲ್ಲಿ ತಿಳಿಯಬೇಕು!

4 comments:

GaneshaSpeaks said...

alala saastri.. good start maga keep it up..

Anil Masakal said...

good start... keep blogging

Aravind M V said...

Chinmay... its good to see you writing...! keep writing..!

ಜಲನಯನ said...

ಚಿನ್ಮಯವ್ರೇ...ನನ್ನ ಗೆಳೆಯ ಚಿನ್ಮಯ ಯಾವಾಗ ಬ್ಲಾಗ್ ಪ್ರಾರಂಬಿಸ್ದಾ...??!! ಆಶ್ಚರ್ಯ ಆಗಿ ಇಲ್ಲಿಗೆ ಬಂದ್ರೆ ...ನಿಮ್ಮ ಬ್ಲಾಗು....ಹಹಹ....ಚನ್ನಾಗಿದೆ,,,ಚುನಾವಣೆ ನಮ್ಮಲ್ಲಿ ಒಂದು ರಣರಂಗ.....every thing is FAIR in LOVE and WAR ಅನ್ನೋದನ್ನ ನಂಬಿರೋ ಜನ ನಾವು...ಅದಕ್ಕೇ ಎಲ್ಲಾ ದಾಂಧಲೆ, ಕಾದಾಟ..ಕಿತ್ತಾಟ...