Sunday, June 6, 2010

ಪ್ರಯಾಣ ಕಥನ-೨ (Rhossilli Bay)

ಮತ್ತೊಂದು ವಾರಾಂತ್ಯ! ಮತ್ತೊಂದು ಪ್ರಯಾಣ ಕಥನ!
ಇಂಗ್ಲಂಡ್ ಅಲ್ಲಿ ಒಂದು ಪ್ರಚಲಿತ ಗಾದೆ ಮಾತಿದೆ. “In England never trust 3 'W 's. Weather, Women and work”
ನನಗೆ ಇದರ ಅರಿವಿದ್ದರು ಅನುಭವ ಇರಲಿಲ್ಲ.
ಕಳೆದ ವಾರ ಇಂಗ್ಲಂಡನ ಪಶ್ಚಿಮದ ತುದಿಯಾದ 'Rhosilli Bay' ಗೆ ಹೋಗುವ ಅವಕಾಶ ಬಂದಿತ್ತು.
ಪೂರ್ತಿ ಸಮುದ್ರ ತೀರದಿಂದ ಸುತ್ತುವರೆದಿವ Gower ಪ್ರಾಂತ್ಯ ಸುಂದರವಾದ ಪ್ರದೇಶ. Wales ನಲ್ಲಿ ಬರುವ ಈ ಪ್ರಾಂತ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ! ಸಂಗೀತ ಪ್ರಿಯರು, ಸೌಂದರ್ಯ ಪ್ರಿಯರು ಅದ Wales ಜನರನ್ನು ಮಾತ್ರ ಸ್ವಲ್ಪ ದೂರವೇ ಇಡುತ್ತಾರೆ!
ನಾವು ೩ ಜನ. Swansea ಎಂಬ ಊರಿಗೆ ಹೋಗಿ ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುವ ಆಲೋಚನೆ ನಮ್ಮದು. ಬೆಳಿಗ್ಗೆ ೭ ಗಂಟೆಗೆ ಹೊರಟಾಗ   ಮಳೆಯ ಲಕ್ಷಣಗಳು ಕಾಣುತ್ತಿತ್ತು. ಈ ಬೇಸಿಗೆಯ ದಿನದಲ್ಲಿ ಇನ್ನೆಸ್ಟು ಮಳೆ ಬರಬಹುದು ಎಂಬ ಹುಂಬು ದ್ಯೆರ್ಯದಿಂದ ಹೊರಟ ನಮಗೆ  Swansea ಹೆದರಿಕೆ ತಂದಿತ್ತು. ಹಿಂದಿನ ದಿನ ತುಂಬು ಬೇಸಿಗೆಯಂತೆ ಕಾಣುತ್ತಿದ್ದ ಪರಿಸರ ಒಂದೇ ದಿನದಲ್ಲಿ ಕೊರೆಯುವ ಚಳಿ, ಮಳೆ ಗಾಳಿ ಇಂದ  ಬೆಚ್ಚಿ ಬೀಳಿಸಿತ್ತು. ಕೊಡೆ ಹಾರಿ ಹೋಗುವ ತರದಲ್ಲಿ ಗಾಳಿ ಬೀಸುತಿತ್ತು.ಅಲ್ಲಿಂದ ತಿರುಗಿ ಹೋಗಿ ಬಿಡುವ ಯೋಚನೆ ಬಂದಿದ್ದು  ಸಹಜ. ಆದರೆ ಸಾಯಂಕಾಲದ ವರೆಗೆ ಸಮಯ ತಳ್ಳಲೇ ಬೇಕಿತ್ತು.
ಸುಮಾರು ೧೦ ಗಂಟೆಯ ಸಮಯಕ್ಕೆ ವಾತಾವರಣ ಸ್ವಲ್ಪ ತಿಳಿಯಾದಾಗ ನಮ್ಮ ಪ್ರವಾಸಕ್ಕೆ ಮತ್ತೆ ಜೀವ ಬಂತು. ಬೇಸಿಗೆಯಲ್ಲಿ ಎಲ್ಲೆಲ್ಲು ಹಸಿರು ತುಂಬಿರುವ ಹಳ್ಳಿಗಾಡು ನೋಡಲು ತುಂಬಾ ಚಂದ! ಹೈನುಗಾರಿಕೆ ಪ್ರಮುಖವಾಗಿರುವ ಈ ದೇಶಗಲ್ಲಿ ಎಲ್ಲಿ ನೋಡಿದರು ಕುರಿ, ದನ ಮೇಯುತ್ತಿರುವ ಹುಲ್ಲುಗಾವಲುಗಳು ಮಾತ್ರ ನೋಡಲು ಸಿಗುತ್ತವೆ. ನಮ್ಮೊರಿನಂತೆ ಬೇರೆ ಬೇರೆ ಗಿಡ ಮರಗಳು
ಇರದೇ ಇದ್ದರೂ ಎಲ್ಲಿ ನೋಡಿದರು ಹಸಿರು ಕಾಣುತ್ತದೆ.
ಹುಳದ ತಲೆಯನ್ನು ( worms head) ಹೋಲುವ Rhosilli Bay ತುಂಬಾ ಸುಂದರವಾದ ಜಾಗ. 





ಈ ಮೇಲಿನ ಚಿತ್ರ ನಾನು ತೆಗೆದಿದ್ದಲ್ಲ. ಕ್ಷಮೆ ಇರಲಿ.

ಮೋಡ ಕವಿದ ವಾತಾವರಣ ಇದ್ದರೂ ನಮ್ಮ ಉತ್ಸಾಹಕ್ಕೇನು ಮೋಡ ಕವಿದಿರಲಿಲ್ಲ. ಪ್ರಕರವಾದ ಸೂರ್ಯನ ಬೆಳಕಿರುವ ಸಮುದ್ರತೀರಗಳು ಕುಮಟಾದಲ್ಲಿ ವಿದ್ಯಾಬ್ಯಾಸ ಮಾಡಿರುವ ನನಗೆ ಹೊಸದಲ್ಲ. ಆದರೆ ಸಮುದ್ರದ ತೀರದಲ್ಲೇ ಮಂಜು 
ಮುಸುಕಿದ ಗುಡ್ಡಗಳು ನನಗೆ ತೀರ ಹೊಸದು.   ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.













ಪ್ರವಾಸದ ಪ್ರಮುಖ ವಿಷಯಗಲ್ಲಿ ನಮ್ಮ ಶ್ರಂಗೇರಿ ಹುಡುಗ ನವೀನನಿಗೆ ಜೀವನದಲ್ಲಿ ಮೊದಲ ಬಾರಿ ಸಮುದ್ರ ದರ್ಶನದ ಭಾಗ್ಯ


ನಿಮ್ಮ ಅಭಿಪ್ರಾಯ/ ಬ್ಲಾಗ್ ಅನ್ನು ಉತ್ತಮಗೊಳಿಸಲು ಸಲಹೆ ತಿಳಿಸಿ..

3 comments:

naveen said...

namaskra anna....thavu ello hogbitri
ee tharanu ondu trip na describe maadbahudu ankondirlilla....
olle prayatna...keep it up

ವಿ.ರಾ.ಹೆ. said...

ನಮಸ್ಕಾರ,

ಜಾಸ್ತಿ ವಿವರಣೆ ಕೊಡಿ.. ಚೆನ್ನಾಗಿರತ್ತೆ.

shridhar said...

ಚಿನ್ನು,
ಸಕತ ಫೋಟೊಸ್ .. ಮಸ್ತ ಪ್ಲೇಸ್ .. ಮತ್ತಷ್ಟು ವಿವರೆಗಳೊಂದಿಗೆ ಬರಿ .. ಚೆನ್ನಾಗಿರ್ತು ...