Sunday, June 6, 2010

ಪ್ರಯಾಣ ಕಥನ-೨ (Rhossilli Bay)

ಮತ್ತೊಂದು ವಾರಾಂತ್ಯ! ಮತ್ತೊಂದು ಪ್ರಯಾಣ ಕಥನ!
ಇಂಗ್ಲಂಡ್ ಅಲ್ಲಿ ಒಂದು ಪ್ರಚಲಿತ ಗಾದೆ ಮಾತಿದೆ. “In England never trust 3 'W 's. Weather, Women and work”
ನನಗೆ ಇದರ ಅರಿವಿದ್ದರು ಅನುಭವ ಇರಲಿಲ್ಲ.
ಕಳೆದ ವಾರ ಇಂಗ್ಲಂಡನ ಪಶ್ಚಿಮದ ತುದಿಯಾದ 'Rhosilli Bay' ಗೆ ಹೋಗುವ ಅವಕಾಶ ಬಂದಿತ್ತು.
ಪೂರ್ತಿ ಸಮುದ್ರ ತೀರದಿಂದ ಸುತ್ತುವರೆದಿವ Gower ಪ್ರಾಂತ್ಯ ಸುಂದರವಾದ ಪ್ರದೇಶ. Wales ನಲ್ಲಿ ಬರುವ ಈ ಪ್ರಾಂತ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ! ಸಂಗೀತ ಪ್ರಿಯರು, ಸೌಂದರ್ಯ ಪ್ರಿಯರು ಅದ Wales ಜನರನ್ನು ಮಾತ್ರ ಸ್ವಲ್ಪ ದೂರವೇ ಇಡುತ್ತಾರೆ!
ನಾವು ೩ ಜನ. Swansea ಎಂಬ ಊರಿಗೆ ಹೋಗಿ ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುವ ಆಲೋಚನೆ ನಮ್ಮದು. ಬೆಳಿಗ್ಗೆ ೭ ಗಂಟೆಗೆ ಹೊರಟಾಗ   ಮಳೆಯ ಲಕ್ಷಣಗಳು ಕಾಣುತ್ತಿತ್ತು. ಈ ಬೇಸಿಗೆಯ ದಿನದಲ್ಲಿ ಇನ್ನೆಸ್ಟು ಮಳೆ ಬರಬಹುದು ಎಂಬ ಹುಂಬು ದ್ಯೆರ್ಯದಿಂದ ಹೊರಟ ನಮಗೆ  Swansea ಹೆದರಿಕೆ ತಂದಿತ್ತು. ಹಿಂದಿನ ದಿನ ತುಂಬು ಬೇಸಿಗೆಯಂತೆ ಕಾಣುತ್ತಿದ್ದ ಪರಿಸರ ಒಂದೇ ದಿನದಲ್ಲಿ ಕೊರೆಯುವ ಚಳಿ, ಮಳೆ ಗಾಳಿ ಇಂದ  ಬೆಚ್ಚಿ ಬೀಳಿಸಿತ್ತು. ಕೊಡೆ ಹಾರಿ ಹೋಗುವ ತರದಲ್ಲಿ ಗಾಳಿ ಬೀಸುತಿತ್ತು.ಅಲ್ಲಿಂದ ತಿರುಗಿ ಹೋಗಿ ಬಿಡುವ ಯೋಚನೆ ಬಂದಿದ್ದು  ಸಹಜ. ಆದರೆ ಸಾಯಂಕಾಲದ ವರೆಗೆ ಸಮಯ ತಳ್ಳಲೇ ಬೇಕಿತ್ತು.
ಸುಮಾರು ೧೦ ಗಂಟೆಯ ಸಮಯಕ್ಕೆ ವಾತಾವರಣ ಸ್ವಲ್ಪ ತಿಳಿಯಾದಾಗ ನಮ್ಮ ಪ್ರವಾಸಕ್ಕೆ ಮತ್ತೆ ಜೀವ ಬಂತು. ಬೇಸಿಗೆಯಲ್ಲಿ ಎಲ್ಲೆಲ್ಲು ಹಸಿರು ತುಂಬಿರುವ ಹಳ್ಳಿಗಾಡು ನೋಡಲು ತುಂಬಾ ಚಂದ! ಹೈನುಗಾರಿಕೆ ಪ್ರಮುಖವಾಗಿರುವ ಈ ದೇಶಗಲ್ಲಿ ಎಲ್ಲಿ ನೋಡಿದರು ಕುರಿ, ದನ ಮೇಯುತ್ತಿರುವ ಹುಲ್ಲುಗಾವಲುಗಳು ಮಾತ್ರ ನೋಡಲು ಸಿಗುತ್ತವೆ. ನಮ್ಮೊರಿನಂತೆ ಬೇರೆ ಬೇರೆ ಗಿಡ ಮರಗಳು
ಇರದೇ ಇದ್ದರೂ ಎಲ್ಲಿ ನೋಡಿದರು ಹಸಿರು ಕಾಣುತ್ತದೆ.
ಹುಳದ ತಲೆಯನ್ನು ( worms head) ಹೋಲುವ Rhosilli Bay ತುಂಬಾ ಸುಂದರವಾದ ಜಾಗ.