Sunday, May 23, 2010

ಚುನಾವಣೆ

ಭಾರತದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದ ಆಂಗ್ಲರ ಚುನಾವಣೆ ಕೂತೂಹಲ ಕೆರಳಿಸಿತ್ತು!
ಚುನಾವಣೆ ಎಂದ ಕೂಡಲೇ ಭಾರತೀಯನಾದ ನನ್ನ ಮನಸ್ಸಿಗೆ ಬಂದಿದ್ದು ದೊಡ್ಡ ದೊಡ್ಡ ಪೋಸ್ಟರಗಳು, ಎಲ್ಲೆಲ್ಲು ಕಾಣುವ ಬಾವುಟಗಳು, ಲಕ್ಷಾಂತರ ಜನರು ಕೂಡಿರುವ ಸಭೆಗಳು, ದೊಡ್ಡ ದೊಡ್ಡ ಭಾಷಣಗಳು ಇತ್ಯಾದಿ.
ಆದರೆ ನನಗೆ ನಿರಾಸೆ ಕಾದಿತ್ತು..
ನನಗೆ ಕಾಣಿಸಿದ್ದು ೨ ಪೋಸ್ಟರಗಳು ಮಾತ್ರ....
೧. Conservative ಪಕ್ಷ್ಯದ ಒಂದು ಪೊಸ್ಟರ : Gordan Brown ''I created 100000 unemployment in last one year. Help me to create more" :)
೨. ಲೇಬರ್ ಪಕ್ಷ್ಯದ ಪೊಸ್ಟರ:  To Conservatives and democrats "Better luck next time. Its labourer's party this time"

ಮತದಾನದ ಹಕ್ಕು ಬಂದು 10 ವರ್ಷಗಳಾದರೂ, ಒಮ್ಮೆ ಕೂಡ ಮತ ಚಲಾವಣೆ ಮಾಡದ ನನಗೆ ಇಲ್ಲಿಯ ಮತಕಟ್ಟೆಗೆ ಹೋಗುವ ಅವಕಾಶ ಬಂದಿದ್ದು ಆಕಸ್ಮಿಕ! ಇಲ್ಲಿ ಕೌನ್ಸಿಲ್ tax ಕಟ್ಟುವ ಎಲ್ಲರಿಗೂ ಮತದಾನದ ಹಕ್ಕು ಇರುತ್ತದೆ. ನನಗೆ ಮತದಾನದ ಹಕ್ಕು ಸಿಕ್ಕಿಲ್ಲ. ಆಫಿಸ್ ಮುಗಿಸಿ ಸಾಯಂಕಾಲದ 7 ಗಂಟೆಗೆ  ನಡುಗೆ ನೆಪದಲ್ಲಿ ಮತಕಟ್ಟೆಗೆ ಹೋದಾಗ ನಮಗೆ ಆಶ್ಚರ್ಯ. ಒಬ್ಬನೇ ಚುನಾವಣಾಧಿಕಾರಿ ಅಲ್ಲಿದ್ದ. ನೆಪಕ್ಕೆ ಕೂಡ ಯಾವದೇ ಪೋಲಿಸ್ ಇರಲಿಲ್ಲ. ಒಂದು ಪೇಪರ್ನಲ್ಲಿ ಪೆನ್ಸಿಲಿಂದ ಮಾರ್ಕ್ ಮಾಡಿ ಅಲ್ಲಿದ್ದ ಪೆಟ್ಟಿಗೆಯಲ್ಲಿ ಹಾಕಿ ಬಂದರೆ ಆಯಿತು ಮತದಾನ! ಕೌನ್ಸಿಲ್ ಕಳಿಸಿದ್ದ ಒಂದು ಕಾರ್ಡ್ ಬಿಟ್ಟರೆ ಯಾವ ಗುರುತಿನ ಚೀಟಿಯನ್ನು ಕೇಳಲಿಲ್ಲ. ಆ ಕ್ಷಣದಲ್ಲಿ ಭಾರತದ ಚುನಾವಣೆಯ ಹಗರಣಗಳು ನೆನಪಿಗೆ ಬಂದಿತ್ತು. ಮತದಾನದ ರೀತಿ ಭಾರತಲ್ಲಿ ಇದ್ದಷ್ಟು ಮುಂದುವರೆದಿಲ್ಲ.  ಆದರೆ ಈ ಜನರಲ್ಲಿ ತುಂಬಾ ನಂಬಿಕೆ ಇದೆ ಅನಿಸಿತ್ತು! ಚುನಾವಣಾಧಿಕಾರಿಯಾಗಿ ಹೋಗುತ್ತಿದ್ದ ತಂದೆಯವರಿಂದ ಮತಕಟ್ಟೆಯಲ್ಲಿ ಆಗುವ ಗಲಾಟೆಗಳ ಬಗ್ಗೆ ಕೇಳಿದ್ದ ನನಗೆ ಇಲ್ಲಿಯ ರೀತಿ ತುಂಬಾ ಆಶ್ಚರ್ಯ ತಂದಿತ್ತು.

ರಾತ್ರಿ ೧೦ ಗಂಟೆಗೆ ಮತದಾನ ಮುಗಿದರೆ ೧೧ ಗಂಟೆಗೆಲ್ಲ ಮತ ಎಣಿಕೆ ಪ್ರಾರಂಭವಾಗಿತ್ತು. ಬೆಳಿಗ್ಗೆ ಕಾಫಿಯ ಜೊತೆ ಹಿಂದಿನ ದಿನದ ಮತದಾನದ ಫಲಿತಾಂಶ ತಯಾರು. ಆ ಕ್ಷೇತ್ರದ ಅಬ್ಯರ್ಥಿಗಳನ್ನು ಒಂದು ಕಡೆ ನಿಲ್ಲಿಸಿ, ಗೆದ್ದವರನ್ನು ಅಭಿನಂದಿಸಿದರು. ಅಲ್ಲಿಗೆ ಮತದಾನದ ಕಥೆ ಮುಗಿಯಿತು.

ಒಂದು ತಿಂಗಳ ಭರಾಟೆ,ಒಂದು ರಜಾ ದಿನದ ಮತದಾನ, ೧೫ ದಿನ ಕಾಯುವಿಕೆ, ಚುನಾವಣ ನಂತರದ ನಾಟಕಗಳು, ಹೀಗೆ ಯಾವುದೇ ಕುತೂಹಲಕಾರಿ ಸಿನೆಮಾಗೆ ಕಡಿಮೆ ಇರದಂತೆ ರೂಪುಗೊಳ್ಳುವ ಭಾರತದ ಮತದಾನ ಪದ್ದತಿಯ ಮಜಾ ಇವರಿಗೆಲ್ಲಿ ತಿಳಿಯಬೇಕು!

Saturday, May 8, 2010

ನನ್ನ ಪ್ರಯಾಣ ಕಥನ-1!

ಮಾರ್ಚ್ ೨೬ ಕ್ಕೆ ನನಗೆ ಇಂಗ್ಲೆಂಡಗೆ ಹೋಗಬೇಕು ಎಂದು ತಿಳಿಸಿದಾಗ ನಾನು ವಿಚಿತ್ರ ಯೋಚನೆಗಳಿಗೆ ಸಿಕ್ಕಿದ್ದೆ.
ಹೊಸ ದೇಶ ನೋಡುವ, ಹೊಸ ಕೆಲಸ ಮಾಡುವ ಉತ್ಸಾಹ ಒಂದು ಕಡೆ! ಜಗತ್ತಿನ ೨ನೆ ದೊಡ್ಡ ವಿಮಾನ ತಯಾರಿಕ ಕಂಪನಿನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೇನೆ ಎಂಬ ಸಂತೋಷ! ಭಾರತದಂತ ದೇಶವನ್ನು ೩೦೦ ವರ್ಷ ಲೂಟಿ ಮಾಡಿದ ದುಡ್ಡಿನಿಂದ ಕಟ್ಟಿದ ದೇಶವನ್ನು ನೋಡಬೇಕು ಎಂಬ ಆಸೆ! ಮುಖ್ಯವಾಗಿ ಎಲ್ಲರಿಗೆ ಇರುವಂತೆ ಒಂದಷ್ಟು ಜಾಸ್ತಿ ದುಡ್ಡು ಮಾಡಬೇಕು ಅನ್ನುವದು ಮುಖ್ಯ ಉದ್ದೇಶ!

ಇದೆಲ್ಲದರ ನಡುವೆ ನನ್ನ ಕುಟುಂಬದವರಿಂದ, ಗೆಳೆಯ , ಗೆಳೆತಿಯರಿಂದ , ನನ್ನ ಭಾರತ ದೇಶದಿಂದ ದೂರವಾಗಿ ಇರುವದನ್ನು ನೆನಸಿಕೊಂಡರೆ ಎಲ್ಲಿಲ್ಲದ ತಳಮಳ! ೧೬ ವರ್ಷಗಳಷ್ಟು ದೀರ್ಘ ಕಾಲದಿಂದ ಮನೆಯಿಂದ ದೂರದಲ್ಲೇ ಇದ್ದರೂ, ಮನೆಯ ಯಾವ ಕರೆಗೂ ನಾನು ದೂರದಲ್ಲಿಲ್ಲ ಎಂಬ ದ್ಯೆರ್ಯ ನನಗಿತ್ತು! ಅಂತರ್ಜಾಲದ ಬೆಳವಣಿಗೆ ಇಂದ ನಾನು ಹತ್ತಿರದಲ್ಲೇ ಇರಬಲ್ಲೆ ಎಂಬ ವಿಶ್ವಾಸ ಇದ್ದರೂ ಅದು virtual ವಿಶ್ವಾಸ ಎಂಬ ನಿಜ ಸತ್ಯ ನನಗೆ ಹೊಸದಲ್ಲ. ದೂರದಿಂದ ಉಂಟಾಗುವ ಏಕಾಂತದ ಕೊರಗು, ಹೊಸ ಆಹಾರ, ಹೊಸ ಜೀವನಶ್ಯೆಯ್ಲಿ, ಹೊಸ ಜನರ ಒಡನಾಟ ಇನ್ನು ಏನೇನು ಹೊಸದು ಕಾದಿದೆಯೋ ಎಂಬ ಯೋಚನೆ. ಪ್ರಯಾಣಕ್ಕೆ ಬೇಕಾದ ತಯಾರಿಯಾ ತಲೆ ಬಿಸಿ ಒಂದು ಕಡೆ ಆದರೆ, ಹೊಸ ದೇಶಕ್ಕೆ ಹೋಗುವಾಗ ನಮ್ಮ ಜನರು ಕೊಡುವ ವಿಧ ವಿಧದ ಅನುಭವಗಳ ಸರಮಾಲೆ ಇನ್ನೊಂದುಕಡೆ!

ಇದೆಲ್ಲದರ ನಡುವೆ ನನ್ನ ಮನೆಯಲ್ಲಿದ್ದ ಸರಂಜಾಮುಗಳನ್ನು ಎಲ್ಲಿ, ಹೇಗೆ ಸಾಗಿಸಲಿ ಎಂಬ ಯೋಚಿಸಿ ಹಣ್ಣಾಗುತ್ತಿದ್ದ ನನಗೆ ಅಪ್ಪ, ಅಕ್ಕ ಮತ್ತು ಸಹೋದರನ ಸಹಕಾರ ವರದಾನವಗಿತ್ತು. ನಾನಿದ್ದ ಮನೆಯ Owner ಸಹಾಯವೂ ಕೂಡ ತುಂಬಾ ಉಪಯೋಗಕ್ಕೆ ಬರುವಂತಾಯಿತು.
ಈ ಎಲ್ಲ ಗೊಂದಲಗಳಿಗೆ ಕಳಶವಿಟ್ಟಂತೆ ನನ್ನ ವಧು ಅನ್ವೇಷಣೆಯ ಮೊದಲ ಭೇಟಿ ಕಾರ್ಯಕ್ರಮ ಕೂಡ ತೂರಿ ಕೊಂಡು ಕೈಕಾಲು ಸ್ವಲ್ಪ ನಡುಗಿದ್ದು ನಿಜ!!
ಮೊದಲ ದಿನ ನನ್ನ 2 ವರ್ಷದ ಆತ್ಮೀಯ ಗೆಳತಿಯನ್ನು (ನನ್ನ Biku..) ಊರಿಗೆ ಕಳಿಸಿದಾಗ ಮೊದಲ ಬಾರಿ ದೂರದ ಅನುಭವ! ಎರಡನೆ ದಿನ ರಾತ್ರಿ ೩ ಗಂಟೆಯ ತನಕ ನಮ್ಮೊರ ಜಾತ್ರೆಯಲ್ಲಿ ಅಲೆಯುತ್ತಿದಾಗ ನಾನು ಏನೆಲ್ಲ ಕಳೆದು ಕೊಳ್ಳಲಿದ್ದೇನೆ ಅನಿಸಿತ್ತು! ೪ ನೇ ದಿನ ಸಾಯಂಕಾಲ ಮ್ಯಾನೇಜರ್ ಇಂದ ಪ್ರಯಾಣಕ್ಕೆ ಅಂತಿಮ ಅನುಮತಿ ಬಂದಮೇಲೆ ೨ ದಿನದ ನಿರಂತರ ಓಟ, 'ಮಿಂಚಿನ ಓಟ' ಚಿತ್ರದ ಶಂಕರ ನಾಗ್ ಅವರನ್ನು ಕೂಡ ಮರೆಸುವಂತಿತ್ತು!
ಅಂತು ಇಂತೂ ೨ ಏಪ್ರಿಲ್ ಗೆ  ಬೆಂಗಳೂರಿನಿಂದ ಹೊರಟು, ಚೆನ್ನೈ, ಬ್ರುಸ್ಸೆಲ್ಸ್ ಮಾರ್ಗವಾಗಿ ಬ್ರಿಸ್ಟೊಲ್ ಗೆ ಬಂದು ತಲುಪಿದೆ!

ಇನ್ನು ಮುಂದಾದರು ಸೋಮಾರಿತನ ಬಿಟ್ಟು ಸ್ವಲ್ಪ ಬ್ಲಾಗ್ ಮತ್ತು ಫೋಟೋಗ್ರಫಿ ಬಗ್ಗೆ ಆಸಕ್ತಿ ತೋರಿಸಬೇಕು ಅಂದು ಕೊಂಡು ೨-೩ ವರ್ಷವಾಯಿತು! ಇನ್ನು ಆಗಿಲ್ಲ...ನೋಡೋಣ ಏನಾಗುತ್ತೆ ಅಂತ!!!