ಮಾರ್ಚ್ ೨೬ ಕ್ಕೆ ನನಗೆ ಇಂಗ್ಲೆಂಡಗೆ ಹೋಗಬೇಕು ಎಂದು ತಿಳಿಸಿದಾಗ ನಾನು ವಿಚಿತ್ರ ಯೋಚನೆಗಳಿಗೆ ಸಿಕ್ಕಿದ್ದೆ.
ಹೊಸ ದೇಶ ನೋಡುವ, ಹೊಸ ಕೆಲಸ ಮಾಡುವ ಉತ್ಸಾಹ ಒಂದು ಕಡೆ! ಜಗತ್ತಿನ ೨ನೆ ದೊಡ್ಡ ವಿಮಾನ ತಯಾರಿಕ ಕಂಪನಿನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೇನೆ ಎಂಬ ಸಂತೋಷ! ಭಾರತದಂತ ದೇಶವನ್ನು ೩೦೦ ವರ್ಷ ಲೂಟಿ ಮಾಡಿದ ದುಡ್ಡಿನಿಂದ ಕಟ್ಟಿದ ದೇಶವನ್ನು ನೋಡಬೇಕು ಎಂಬ ಆಸೆ! ಮುಖ್ಯವಾಗಿ ಎಲ್ಲರಿಗೆ ಇರುವಂತೆ ಒಂದಷ್ಟು ಜಾಸ್ತಿ ದುಡ್ಡು ಮಾಡಬೇಕು ಅನ್ನುವದು ಮುಖ್ಯ ಉದ್ದೇಶ!
ಇದೆಲ್ಲದರ ನಡುವೆ ನನ್ನ ಕುಟುಂಬದವರಿಂದ, ಗೆಳೆಯ , ಗೆಳೆತಿಯರಿಂದ , ನನ್ನ ಭಾರತ ದೇಶದಿಂದ ದೂರವಾಗಿ ಇರುವದನ್ನು ನೆನಸಿಕೊಂಡರೆ ಎಲ್ಲಿಲ್ಲದ ತಳಮಳ! ೧೬ ವರ್ಷಗಳಷ್ಟು ದೀರ್ಘ ಕಾಲದಿಂದ ಮನೆಯಿಂದ ದೂರದಲ್ಲೇ ಇದ್ದರೂ, ಮನೆಯ ಯಾವ ಕರೆಗೂ ನಾನು ದೂರದಲ್ಲಿಲ್ಲ ಎಂಬ ದ್ಯೆರ್ಯ ನನಗಿತ್ತು! ಅಂತರ್ಜಾಲದ ಬೆಳವಣಿಗೆ ಇಂದ ನಾನು ಹತ್ತಿರದಲ್ಲೇ ಇರಬಲ್ಲೆ ಎಂಬ ವಿಶ್ವಾಸ ಇದ್ದರೂ ಅದು virtual ವಿಶ್ವಾಸ ಎಂಬ ನಿಜ ಸತ್ಯ ನನಗೆ ಹೊಸದಲ್ಲ. ದೂರದಿಂದ ಉಂಟಾಗುವ ಏಕಾಂತದ ಕೊರಗು, ಹೊಸ ಆಹಾರ, ಹೊಸ ಜೀವನಶ್ಯೆಯ್ಲಿ, ಹೊಸ ಜನರ ಒಡನಾಟ ಇನ್ನು ಏನೇನು ಹೊಸದು ಕಾದಿದೆಯೋ ಎಂಬ ಯೋಚನೆ. ಪ್ರಯಾಣಕ್ಕೆ ಬೇಕಾದ ತಯಾರಿಯಾ ತಲೆ ಬಿಸಿ ಒಂದು ಕಡೆ ಆದರೆ, ಹೊಸ ದೇಶಕ್ಕೆ ಹೋಗುವಾಗ ನಮ್ಮ ಜನರು ಕೊಡುವ ವಿಧ ವಿಧದ ಅನುಭವಗಳ ಸರಮಾಲೆ ಇನ್ನೊಂದುಕಡೆ!
ಇದೆಲ್ಲದರ ನಡುವೆ ನನ್ನ ಮನೆಯಲ್ಲಿದ್ದ ಸರಂಜಾಮುಗಳನ್ನು ಎಲ್ಲಿ, ಹೇಗೆ ಸಾಗಿಸಲಿ ಎಂಬ ಯೋಚಿಸಿ ಹಣ್ಣಾಗುತ್ತಿದ್ದ ನನಗೆ ಅಪ್ಪ, ಅಕ್ಕ ಮತ್ತು ಸಹೋದರನ ಸಹಕಾರ ವರದಾನವಗಿತ್ತು. ನಾನಿದ್ದ ಮನೆಯ Owner ಸಹಾಯವೂ ಕೂಡ ತುಂಬಾ ಉಪಯೋಗಕ್ಕೆ ಬರುವಂತಾಯಿತು.
ಈ ಎಲ್ಲ ಗೊಂದಲಗಳಿಗೆ ಕಳಶವಿಟ್ಟಂತೆ ನನ್ನ ವಧು ಅನ್ವೇಷಣೆಯ ಮೊದಲ ಭೇಟಿ ಕಾರ್ಯಕ್ರಮ ಕೂಡ ತೂರಿ ಕೊಂಡು ಕೈಕಾಲು ಸ್ವಲ್ಪ ನಡುಗಿದ್ದು ನಿಜ!!
ಮೊದಲ ದಿನ ನನ್ನ 2 ವರ್ಷದ ಆತ್ಮೀಯ ಗೆಳತಿಯನ್ನು (ನನ್ನ Biku..) ಊರಿಗೆ ಕಳಿಸಿದಾಗ ಮೊದಲ ಬಾರಿ ದೂರದ ಅನುಭವ! ಎರಡನೆ ದಿನ ರಾತ್ರಿ ೩ ಗಂಟೆಯ ತನಕ ನಮ್ಮೊರ ಜಾತ್ರೆಯಲ್ಲಿ ಅಲೆಯುತ್ತಿದಾಗ ನಾನು ಏನೆಲ್ಲ ಕಳೆದು ಕೊಳ್ಳಲಿದ್ದೇನೆ ಅನಿಸಿತ್ತು! ೪ ನೇ ದಿನ ಸಾಯಂಕಾಲ ಮ್ಯಾನೇಜರ್ ಇಂದ ಪ್ರಯಾಣಕ್ಕೆ ಅಂತಿಮ ಅನುಮತಿ ಬಂದಮೇಲೆ ೨ ದಿನದ ನಿರಂತರ ಓಟ, 'ಮಿಂಚಿನ ಓಟ' ಚಿತ್ರದ ಶಂಕರ ನಾಗ್ ಅವರನ್ನು ಕೂಡ ಮರೆಸುವಂತಿತ್ತು!
ಅಂತು ಇಂತೂ ೨ ಏಪ್ರಿಲ್ ಗೆ ಬೆಂಗಳೂರಿನಿಂದ ಹೊರಟು, ಚೆನ್ನೈ, ಬ್ರುಸ್ಸೆಲ್ಸ್ ಮಾರ್ಗವಾಗಿ ಬ್ರಿಸ್ಟೊಲ್ ಗೆ ಬಂದು ತಲುಪಿದೆ!
ಇನ್ನು ಮುಂದಾದರು ಸೋಮಾರಿತನ ಬಿಟ್ಟು ಸ್ವಲ್ಪ ಬ್ಲಾಗ್ ಮತ್ತು ಫೋಟೋಗ್ರಫಿ ಬಗ್ಗೆ ಆಸಕ್ತಿ ತೋರಿಸಬೇಕು ಅಂದು ಕೊಂಡು ೨-೩ ವರ್ಷವಾಯಿತು! ಇನ್ನು ಆಗಿಲ್ಲ...ನೋಡೋಣ ಏನಾಗುತ್ತೆ ಅಂತ!!!
2 comments:
Good to see people writing in Kannada so well even now. Can imagine, how much time n pain U might have taken for it ;-)
No comments other than saying ur first article on ur blog has come out superbly. Gr8 writing (as an amature blogger)!!!
The last sentence might be opinion, experience of many... anyway U ve come out of it. Keep blogging...
Thamma,
Ninnanna ee thara ontiyagi bittare olle 'chinthana lekhana'gallanna barithiya antha gotthiddiddare, namma Kannada Pradhikaradavaru Canada/US/UK antha munchene kalistha iddaru!!
Khushi aithu lekhana oodi ... Sadaa baritha iru ..
Athmiya
Ganesha
Post a Comment