Wednesday, November 21, 2012

ವಾರದ ವಿಶೇಷ ವ್ಯಕ್ತಿಗಳು


ಬಾಳಾ ಟಾಕ್ರೆ: ಶಿವಸೇನೆ ಪಕ್ಷವನ್ನು ಹುಟ್ಟುಹಾಕಿ ಹಿಂದೂ ಜಾಗ್ರತಿಗೆ ಒಂದು ತೀಕ್ಷ್ಣ ಸ್ವರ ಕೊಟ್ಟ ಧುರೀಣ ರಾಜಕಾರಣಿ. ಮರಾಠಿ ಜನರ ಹೊರತಾಗಿ ಎಲ್ಲರನ್ನು ಹೊರಗಿನವರಂತೆ ಕಂಡ ಬಾಳಾ, ಕಾಂಗ್ರೆಸ್ಸ್ ಕೌಟುಂಬಿಕ ರಾಜಕಾರಣಕ್ಕೆ ಸವಾಲು ಹಾಕಿದ ಕೆಲವೇ ಕೆಲವು ಗಟ್ಟಿ ಜನಗಳಲ್ಲಿ ಒಬ್ಬ ಎಂಬ ಮಾತನ್ನು ಅಲ್ಲಗಳೆಯಲಾಗುವದಿಲ್ಲ. ಬೆಳಗಾವಿಯಲ್ಲಿ ತಂದಿಟ್ಟ ಕಲಹದಿಂದ ಕನ್ನಡಿಗರ ಹೃದಯದಲ್ಲಿ ಬಾಳಾಗೆ ಜಾಗ ಇಲ್ಲ. ಆದರೂ ರಾಜಕಾರಣದಲ್ಲಿ ದಿಟ್ಟ ನಿಲುವು, ಹಿಂದೂ ತೀವ್ರವಾದ, 'ಸರ್ಕಾರ್ ' ತರಹದ ಹೇಳಿಕೆಗಳು ಇಷ್ಟವಾಗುವ ವಿಚಾರಗಳು.
ಆದರೆ ವಯಸ್ಸು ಮೀರಿ ಬಾಳಾ 86 ವರ್ಷ ವಯಸ್ಸಿನಲ್ಲಿ ಸಾವಿಗೆ ಶರಣಾದ. ಒಂದು ಕಾಲು ಕೋಟಿ ಜನರಿಂದ ತುಂಬಿ ತುಳುಕುತ್ತಿರುವ ಮುಂಬೈಯನ್ನು 3 ದಿನ ಮುಚ್ಚಲಾಯಿತು. ಜಗತ್ತಿನ ಅತಿ ದೊಡ್ಡ ವಾಣಿಜ್ಯ ಕೇಂದ್ರವಾದ ಮುಂಬೈಯಲ್ಲಿ ಎಷ್ಟು ಕೋಟಿ ನಷ್ಟವಾಯಿತೋ?. ಯಾವುದೇ ಗಲಾಟೆ ಆಗದೆ ಇದ್ದರು ಬಂಧ ಅನ್ನು facebook ನಲ್ಲಿ ಪ್ರಶ್ನಿಸಿದ ಇಬ್ಬರು ಮಹಿಳೆಯರು ಜೈಲು ಸೇರಿದರು. ರಾಜಕುಮಾರ ಮರಣ ಹೊಂದಿದಾಗ ಬೆಂಗಳೂರು 1 ವಾರ ಬಂದ್ ಆಗಿ ಅಪಾರ ನಸ್ಟವಾಗಿದ್ದು ನೆನಪಾಯಿತು. ಆಂಧ್ರದ ಮುಖ್ಯಮಂತ್ರಿ YSR ಮರಣ ಹೊಂದಿದಾಗ ಪೂರ್ತಿ ಕರ್ನಾಟಕದಲ್ಲಿ ಕೂಡ ರಜೆ ಘೋಷಿಸಿದ್ದು ನೆನಪಿಗೆ ಬಂತು. ನಾವು ಭಾರತೀಯರು  ಪ್ರಸಿದ್ಧ ವ್ಯಕ್ತಿಗಳನ್ನು ಜನರಂತೆ ನೋಡದೆ ದೇವರ ಸಮಾನ ನೋಡುವ ಮನಸ್ಥಿತಿಯನ್ನು ಯಾವಾಗ ಬಿಡುತ್ತಿವೋ ಆ ದೇವರೇ ಬಲ್ಲ!

ಅಜ್ಮಲ್ ಕಸಬ್: ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ  ಉಗ್ರಗಾಮಿ. ನೂರಾರು ಅಮಾಯಕ ಜನರ ಸಾವಿಗೆ ಕಾರಣನಾದ ಉಗ್ರಗಾಮಿಗಳ ಪೈಕಿ ಸಿಕ್ಕಿಬಿದ್ದ ಒಬ್ಬ ಕ್ರಿಮಿ. ಕಳೆದ 4 ವರ್ಷದಲ್ಲಿ ಭಾರತೀಯ  ಮಾದ್ಯಮದಲ್ಲಿ ಅತ್ಯಂತ ಚಲಾವಣೆಯಲ್ಲಿ ಇದ್ದವನು ಕಸಬ್. ಭಾರತದ ರಾಷ್ಟ್ರಪತಿಯ ಬಗ್ಗೆ ಕೇಳಿರದಿದ್ದರೂ ಕಸಬ್ ಬಗ್ಗೆ ಕೇಳಿಯೇ ಕೇಳಿರುತ್ತಾರೆ. 4 ವರ್ಷದಲ್ಲಿ 20 ಕೋಟಿ ಖರ್ಚು ಮಾಡಿಸಿ, ಪುಕ್ಕಟ್ಟೆ ಪ್ರಸಿದ್ದಿ ಪಡೆದು, ಇಂದು ಗಲ್ಲಿಗೇರಿದ. ಭಾರತದ ಸಂಹಿದಾನದಲ್ಲಿ ಮರಣ  ದಂಡನೆ ಕೊಡುವ ಮತ್ತು ಅದನ್ನು ಜಾರಿಗೆ ತರುವ ಶಕ್ತಿ ಇನ್ನು ಇದೆ ಎಂದು ತಿಳಿದು ಸಂತೋಷವಾಯಿತು. ಆದರೆ ಇಂತ ಉಗ್ರಗಾಮಿ ಸಂಘಟನೆಗಳನ್ನು ದಿಟ್ಟವಾಗಿ ಹತ್ತಿಕ್ಕದೆ ಇದ್ದರೆ ಇಂತ ನೂರಾರು 'ಕಸ' ಗಳು ಬರುತ್ತಲೇ ಇರುತ್ತವೆ.

impress


'ಮದುವೆಗೆ ಮೊದಲು ಬ್ಲಾಗ್ ಬರೆದಿದ್ದು ಹೆಂಡತಿಯನ್ನು impress ಮಾಡೋದಕ್ಕ? ಈಗ ಒಂದು ಬರೆಯೋದೇ ಇಲ್ಲ' ಮದುವೆ ಆದ ಮೇಲೆ ಹೆಂಡತಿಯದ್ದು ಒಂದೇ ತಕರಾರು ! 
' ನನಗೆ ಬರೆಯೋಕೆ ಬರೋದೆ ಅಸ್ಟು' ಅಂತ ಹೇಳಿದರು ನಂಬುವದಿಲ್ಲ. ಏನಾದರಾಗಲಿ ಒಂದು ಬಾರಿ ಬರೆಯಲು ಪ್ರಯತ್ನ ಮಾಡಿ ನೋಡೋಣ ಅಂತ ಕುಳಿತರೆ ಯಾವ ವಿಷಯದ ಬಗ್ಗೆ ಬರೆಯಲಿ ಅಂತ ತಿಳಿಯುತ್ತಿಲ್ಲ!