ತುಂಬಾ ದಿನದಿಂದ ಕನ್ನಡದಲ್ಲಿ ಬ್ಲಾಗ್ ಬರೆಯಬೇಕು ಅನ್ನೋ ಆಸೆ. ಮೈಗಳ್ಳತನ ಜಾಸ್ತಿನೇ ಇರೋದ್ರಿಂದ ಆಗಿರಲಿಲ್ಲ!
ವಿಕಾಸನ ಈ ಬ್ಲಾಗ್ ನೋಡಿದಾಗ ನೆನಪಿಗೆ ಬಂದಿದ್ದು ನಮ್ಮ ಪ್ರಾಣೇಶ (ಅದೇ ಗಂಗಾವತಿ ಬೀಚಿ) ನಮ್ಮ ಕಂಪನಿಗೆ ಕನ್ನಡ ರಾಜ್ಯೋತ್ಸವಕ್ಕೆ ಬಂದಾಗ ಹೇಳಿದ ಒಂದು ಜೋಕು
"ಮದ್ವೆ ಅಂದ್ರೆ ಒಂತರಾ ಸಾರ್ವಜನಿಕ ಶೌಚಾಲಯ ಇದ್ದ ಹಾಗೆ ಸಾರ್! ಒಳಗಡೆ ಹೋದ ಜನ ವಾಸನೆ ಅಂತ ಮೂಗು ಮುಚ್ಕೊತಾರೆ. ಹೋಗಗಡೆ ಇರೋ ಜನ ಒಳಗಡೆ ಹೋಗೋಕೆ ಹೊಟ್ಟೆ ಹಿಡ್ಕೊಂಡು ಕಾಯ್ತಾ ಇರ್ತಾರೆ. ಅವರವರ ಕಷ್ಟ ಅವರವರಿಗೆ!"
No comments:
Post a Comment