Sunday, October 3, 2010

ಗಾಳಿಪಟ

'ಗಾಳಿಪಟ' ಈ ಶಬ್ದವೇ ಒಂದು ಸಂತೋಷದ ಅಲೆಯನ್ನು ತರಬಲ್ಲದು.
ಸ್ವಚಂದವಾಗಿ ಹಾರಾಡುತ್ತಿದ್ದರೂ ಕಾಣದ ದಾರದಿಂದ ನಿಯಂತ್ರಿಸಲ್ಪಡುವ ಗಾಳಿಪಟ ತಲತಲಾಂತರದಿಂದ ಕುತೂಹಲ ಕೆರಳಿಸಿದೆ. ಉತ್ತರ ಭಾರತದ ಕೆಲವು ಕಡೆ ಗಾಳಿಪಟ ಸಂಕ್ರಾಂತಿ ಹಬ್ಬದಲ್ಲಿ ಊರಿನ ಜನರೆಲ್ಲಾ ಕೂಡಿ ಹಾರಿಸುತ್ತಾರೆ ಅಂತ ಕೇಳಿದ್ದೇನೆ.  ಅನೇಕ ಮಹತ್ವದ ವ್ಯೆಜ್ಞಾನಿಕ ಕನಸುಗಳಿಗೂ, ಸುಂದರವಾದ ಕೃತಿಗಳಿಗೂ, ಕವನಗಳಿಗೂ ಕಾರಣವಾಗಿರುವ ಗಾಳಿಪಟ ಅನೇಕರ ಬಾಲ್ಯದ ಒಂದು ಅವಿಭಾಜ್ಯ ಅಂಗ. 
ಗಾಳಿಪಟ ಮಾಡುವದರಲ್ಲಿ ಎತ್ತಿದ ಕೈ ಆಗಿದ್ದ ನನಗೆ ಇಲ್ಲೊಂದು 'ಅಂತರಾಷ್ಟ್ರಿಯ ಗಾಳಿಪಟ ಹಬ್ಬ' ಇದೆ ಅಂದಾಗ ಕಣ್ಣು ಅರಳಿದ್ದು ಸುಳ್ಳಲ್ಲ. ಗಾಳಿಪಟ ಹಾರಿಸುವ ಯೋಚನೆ ಇರದೇ ಇದ್ದರು, ಫೋಟೋಗ್ರಫಿಗೆ ಒಂದು ನೆಪ ಸಿಕ್ಕಿತ್ತು.

ಅಂದು ಮೊದಲ ಬಾರಿ ಇಂಗ್ಲೆಂಡ್ನಲ್ಲಿ 'traffic jam'ಅನುಭವ.

ಅಗಸ್ಟೆ ಮುಗಿಲ ಕಡೆಗೆ ಮುಖ ಮಾಡುತ್ತಿದ್ದ ಗಾಳಿಪಟಗಳು ಕಂಡಿದ್ದು ಹೀಗೆ.

ತಲೆ ಮೇಲೊಂದು ಮೊಸಳೆ!

ಸಿನಿಮೀಯವಾಗಿ ಕಾಣುವ ಗಾಳಿ 'ಪಟ್ಟಿ' ಗಳು

ಚಕ್ರಾಕಾರದ ವಿನ್ಯಾಸ.

ಧರೆಗಿಳಿಯುತ್ತಿರುವ ಭೂತ!

ಬಾನಲ್ಲಿ ಒಂದು ಒಕ್ಟೊಪಾಸ್ 

ಬಣ್ಣದ ಬಾವಲಿ 
ನಮ್ಮ ಮೆಚ್ಚಿನ ಪೋಸ್ಟಮ್ಯಾನ

ಹುಲಿ ಹಿಡಿಯುತ್ತಿರುವ ಕಾರ್ಟೂನ್ ಹಂದಿ!

ಕೋಪಗೊಂಡ ವ್ಯಾಘ್ರ 

ಸುಸ್ತಾಗಿ ನೆಲಕ್ಕುರುಳಿದ ಬೌ ಬೌ!


ದಡಿಯರನ್ನೇ ಎತ್ತುತ್ತಿದ್ದ ದ್ಯೆತ್ಯ ಚಕ್ರಗಳು 

ಸಂಗೀತ ಗಾಳಿಪಟಗಳು. ಈ ಗುಂಪು Los Angelis ಇಂದ ಬಂದಿದ್ದು! ಗಾಳಿಪಟ ಹಾರಿಸುವುದೇ ಇವರ ಉದ್ಯೋಗ! ಎಂಟು ಗಾಳಿಪಟಗಳು ಸಂಗೀತಕ್ಕೆ ತಕ್ಕಂತೆ ಒಟ್ಟಾಗಿ ಹಾರುತ್ತಿದ್ದರು ದಾರ ಗಂಟು ಬೀಳದಂತೆ ಒಟ್ಟಾಗಿ ಹರಿಸುವ ಕೈಚಳಕ 
ಮೆಚ್ಚುವಂತದ್ದು.


ಗಗನದಲ್ಲಿ ಚಿತ್ತಾರ ಬರೆದ ಕಲಾಕೃತಿಗಳು!

ಸಾಮಾನ್ಯದಂತೆ ಕಂಡರೂ ಮನ ಸೆಳೆದ ಭಾವುಕ ಮಗುವಿನ ಚಿತ್ರ ಏನೋ ಕಥೆ ಹೇಳಿದಂತಿತ್ತು.

ನಿಮ್ಮ ಯೋಚನೆಗಳನ್ನು ಕಮೆಂಟ್ ಅಲ್ಲಿ ಬರೆದು ತಿಳಿಸಿ.

Sunday, June 6, 2010

ಪ್ರಯಾಣ ಕಥನ-೨ (Rhossilli Bay)

ಮತ್ತೊಂದು ವಾರಾಂತ್ಯ! ಮತ್ತೊಂದು ಪ್ರಯಾಣ ಕಥನ!
ಇಂಗ್ಲಂಡ್ ಅಲ್ಲಿ ಒಂದು ಪ್ರಚಲಿತ ಗಾದೆ ಮಾತಿದೆ. “In England never trust 3 'W 's. Weather, Women and work”
ನನಗೆ ಇದರ ಅರಿವಿದ್ದರು ಅನುಭವ ಇರಲಿಲ್ಲ.
ಕಳೆದ ವಾರ ಇಂಗ್ಲಂಡನ ಪಶ್ಚಿಮದ ತುದಿಯಾದ 'Rhosilli Bay' ಗೆ ಹೋಗುವ ಅವಕಾಶ ಬಂದಿತ್ತು.
ಪೂರ್ತಿ ಸಮುದ್ರ ತೀರದಿಂದ ಸುತ್ತುವರೆದಿವ Gower ಪ್ರಾಂತ್ಯ ಸುಂದರವಾದ ಪ್ರದೇಶ. Wales ನಲ್ಲಿ ಬರುವ ಈ ಪ್ರಾಂತ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ! ಸಂಗೀತ ಪ್ರಿಯರು, ಸೌಂದರ್ಯ ಪ್ರಿಯರು ಅದ Wales ಜನರನ್ನು ಮಾತ್ರ ಸ್ವಲ್ಪ ದೂರವೇ ಇಡುತ್ತಾರೆ!
ನಾವು ೩ ಜನ. Swansea ಎಂಬ ಊರಿಗೆ ಹೋಗಿ ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುವ ಆಲೋಚನೆ ನಮ್ಮದು. ಬೆಳಿಗ್ಗೆ ೭ ಗಂಟೆಗೆ ಹೊರಟಾಗ   ಮಳೆಯ ಲಕ್ಷಣಗಳು ಕಾಣುತ್ತಿತ್ತು. ಈ ಬೇಸಿಗೆಯ ದಿನದಲ್ಲಿ ಇನ್ನೆಸ್ಟು ಮಳೆ ಬರಬಹುದು ಎಂಬ ಹುಂಬು ದ್ಯೆರ್ಯದಿಂದ ಹೊರಟ ನಮಗೆ  Swansea ಹೆದರಿಕೆ ತಂದಿತ್ತು. ಹಿಂದಿನ ದಿನ ತುಂಬು ಬೇಸಿಗೆಯಂತೆ ಕಾಣುತ್ತಿದ್ದ ಪರಿಸರ ಒಂದೇ ದಿನದಲ್ಲಿ ಕೊರೆಯುವ ಚಳಿ, ಮಳೆ ಗಾಳಿ ಇಂದ  ಬೆಚ್ಚಿ ಬೀಳಿಸಿತ್ತು. ಕೊಡೆ ಹಾರಿ ಹೋಗುವ ತರದಲ್ಲಿ ಗಾಳಿ ಬೀಸುತಿತ್ತು.ಅಲ್ಲಿಂದ ತಿರುಗಿ ಹೋಗಿ ಬಿಡುವ ಯೋಚನೆ ಬಂದಿದ್ದು  ಸಹಜ. ಆದರೆ ಸಾಯಂಕಾಲದ ವರೆಗೆ ಸಮಯ ತಳ್ಳಲೇ ಬೇಕಿತ್ತು.
ಸುಮಾರು ೧೦ ಗಂಟೆಯ ಸಮಯಕ್ಕೆ ವಾತಾವರಣ ಸ್ವಲ್ಪ ತಿಳಿಯಾದಾಗ ನಮ್ಮ ಪ್ರವಾಸಕ್ಕೆ ಮತ್ತೆ ಜೀವ ಬಂತು. ಬೇಸಿಗೆಯಲ್ಲಿ ಎಲ್ಲೆಲ್ಲು ಹಸಿರು ತುಂಬಿರುವ ಹಳ್ಳಿಗಾಡು ನೋಡಲು ತುಂಬಾ ಚಂದ! ಹೈನುಗಾರಿಕೆ ಪ್ರಮುಖವಾಗಿರುವ ಈ ದೇಶಗಲ್ಲಿ ಎಲ್ಲಿ ನೋಡಿದರು ಕುರಿ, ದನ ಮೇಯುತ್ತಿರುವ ಹುಲ್ಲುಗಾವಲುಗಳು ಮಾತ್ರ ನೋಡಲು ಸಿಗುತ್ತವೆ. ನಮ್ಮೊರಿನಂತೆ ಬೇರೆ ಬೇರೆ ಗಿಡ ಮರಗಳು
ಇರದೇ ಇದ್ದರೂ ಎಲ್ಲಿ ನೋಡಿದರು ಹಸಿರು ಕಾಣುತ್ತದೆ.
ಹುಳದ ತಲೆಯನ್ನು ( worms head) ಹೋಲುವ Rhosilli Bay ತುಂಬಾ ಸುಂದರವಾದ ಜಾಗ. 

Sunday, May 23, 2010

ಚುನಾವಣೆ

ಭಾರತದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದ ಆಂಗ್ಲರ ಚುನಾವಣೆ ಕೂತೂಹಲ ಕೆರಳಿಸಿತ್ತು!
ಚುನಾವಣೆ ಎಂದ ಕೂಡಲೇ ಭಾರತೀಯನಾದ ನನ್ನ ಮನಸ್ಸಿಗೆ ಬಂದಿದ್ದು ದೊಡ್ಡ ದೊಡ್ಡ ಪೋಸ್ಟರಗಳು, ಎಲ್ಲೆಲ್ಲು ಕಾಣುವ ಬಾವುಟಗಳು, ಲಕ್ಷಾಂತರ ಜನರು ಕೂಡಿರುವ ಸಭೆಗಳು, ದೊಡ್ಡ ದೊಡ್ಡ ಭಾಷಣಗಳು ಇತ್ಯಾದಿ.
ಆದರೆ ನನಗೆ ನಿರಾಸೆ ಕಾದಿತ್ತು..
ನನಗೆ ಕಾಣಿಸಿದ್ದು ೨ ಪೋಸ್ಟರಗಳು ಮಾತ್ರ....
೧. Conservative ಪಕ್ಷ್ಯದ ಒಂದು ಪೊಸ್ಟರ : Gordan Brown ''I created 100000 unemployment in last one year. Help me to create more" :)
೨. ಲೇಬರ್ ಪಕ್ಷ್ಯದ ಪೊಸ್ಟರ:  To Conservatives and democrats "Better luck next time. Its labourer's party this time"

ಮತದಾನದ ಹಕ್ಕು ಬಂದು 10 ವರ್ಷಗಳಾದರೂ, ಒಮ್ಮೆ ಕೂಡ ಮತ ಚಲಾವಣೆ ಮಾಡದ ನನಗೆ ಇಲ್ಲಿಯ ಮತಕಟ್ಟೆಗೆ ಹೋಗುವ ಅವಕಾಶ ಬಂದಿದ್ದು ಆಕಸ್ಮಿಕ! ಇಲ್ಲಿ ಕೌನ್ಸಿಲ್ tax ಕಟ್ಟುವ ಎಲ್ಲರಿಗೂ ಮತದಾನದ ಹಕ್ಕು ಇರುತ್ತದೆ. ನನಗೆ ಮತದಾನದ ಹಕ್ಕು ಸಿಕ್ಕಿಲ್ಲ. ಆಫಿಸ್ ಮುಗಿಸಿ ಸಾಯಂಕಾಲದ 7 ಗಂಟೆಗೆ  ನಡುಗೆ ನೆಪದಲ್ಲಿ ಮತಕಟ್ಟೆಗೆ ಹೋದಾಗ ನಮಗೆ ಆಶ್ಚರ್ಯ. ಒಬ್ಬನೇ ಚುನಾವಣಾಧಿಕಾರಿ ಅಲ್ಲಿದ್ದ. ನೆಪಕ್ಕೆ ಕೂಡ ಯಾವದೇ ಪೋಲಿಸ್ ಇರಲಿಲ್ಲ. ಒಂದು ಪೇಪರ್ನಲ್ಲಿ ಪೆನ್ಸಿಲಿಂದ ಮಾರ್ಕ್ ಮಾಡಿ ಅಲ್ಲಿದ್ದ ಪೆಟ್ಟಿಗೆಯಲ್ಲಿ ಹಾಕಿ ಬಂದರೆ ಆಯಿತು ಮತದಾನ! ಕೌನ್ಸಿಲ್ ಕಳಿಸಿದ್ದ ಒಂದು ಕಾರ್ಡ್ ಬಿಟ್ಟರೆ ಯಾವ ಗುರುತಿನ ಚೀಟಿಯನ್ನು ಕೇಳಲಿಲ್ಲ. ಆ ಕ್ಷಣದಲ್ಲಿ ಭಾರತದ ಚುನಾವಣೆಯ ಹಗರಣಗಳು ನೆನಪಿಗೆ ಬಂದಿತ್ತು. ಮತದಾನದ ರೀತಿ ಭಾರತಲ್ಲಿ ಇದ್ದಷ್ಟು ಮುಂದುವರೆದಿಲ್ಲ.  ಆದರೆ ಈ ಜನರಲ್ಲಿ ತುಂಬಾ ನಂಬಿಕೆ ಇದೆ ಅನಿಸಿತ್ತು! ಚುನಾವಣಾಧಿಕಾರಿಯಾಗಿ ಹೋಗುತ್ತಿದ್ದ ತಂದೆಯವರಿಂದ ಮತಕಟ್ಟೆಯಲ್ಲಿ ಆಗುವ ಗಲಾಟೆಗಳ ಬಗ್ಗೆ ಕೇಳಿದ್ದ ನನಗೆ ಇಲ್ಲಿಯ ರೀತಿ ತುಂಬಾ ಆಶ್ಚರ್ಯ ತಂದಿತ್ತು.

ರಾತ್ರಿ ೧೦ ಗಂಟೆಗೆ ಮತದಾನ ಮುಗಿದರೆ ೧೧ ಗಂಟೆಗೆಲ್ಲ ಮತ ಎಣಿಕೆ ಪ್ರಾರಂಭವಾಗಿತ್ತು. ಬೆಳಿಗ್ಗೆ ಕಾಫಿಯ ಜೊತೆ ಹಿಂದಿನ ದಿನದ ಮತದಾನದ ಫಲಿತಾಂಶ ತಯಾರು. ಆ ಕ್ಷೇತ್ರದ ಅಬ್ಯರ್ಥಿಗಳನ್ನು ಒಂದು ಕಡೆ ನಿಲ್ಲಿಸಿ, ಗೆದ್ದವರನ್ನು ಅಭಿನಂದಿಸಿದರು. ಅಲ್ಲಿಗೆ ಮತದಾನದ ಕಥೆ ಮುಗಿಯಿತು.

ಒಂದು ತಿಂಗಳ ಭರಾಟೆ,ಒಂದು ರಜಾ ದಿನದ ಮತದಾನ, ೧೫ ದಿನ ಕಾಯುವಿಕೆ, ಚುನಾವಣ ನಂತರದ ನಾಟಕಗಳು, ಹೀಗೆ ಯಾವುದೇ ಕುತೂಹಲಕಾರಿ ಸಿನೆಮಾಗೆ ಕಡಿಮೆ ಇರದಂತೆ ರೂಪುಗೊಳ್ಳುವ ಭಾರತದ ಮತದಾನ ಪದ್ದತಿಯ ಮಜಾ ಇವರಿಗೆಲ್ಲಿ ತಿಳಿಯಬೇಕು!